ಹಿಂದುತ್ವದ ಉಳಿವೇ ನಮ್ಮ ಧ್ಯೇಯ -ಭಗತಸಿಂಗ ಯುವಕ ಮಂಡಳಿ ತಾಳಿಕೋಟಿ


"ಗಣಪತಿ ಬಪ್ಪ ಆಲೇ"ಎಲ್ಲೆಲ್ಲೂ ನಿನ್ನದೆ ಧ್ಯಾನ,ಭಕ್ತರ ಮನದಲ್ಲಿ ರಿಂಗಣಿಸುತ್ತಿದೆ ಭಕ್ತಿಯ ನಿನಾದ ,ಭಕ್ತವೃಂದದಲ್ಲಿ ಕಾತುರತೆಯ ವ್ಯವದಾನ,ತಾಳಿಕೋಟೆಯ ಶಿವಾಜಿಚೌಕ್ ವೃತ್ತದಲ್ಲಿ ಸ್ಥಾಪಿಸಲ್ಪಡುವ  ರಾಮಸಿಂಗ ಗೆಳೆಯರ ಬಳಗದ ಸಹಯೋಗದಲ್ಲಿ ಯುವಕ ಮಂಡಳಿ ವತಿಯಿಂದ  ಭಗತಸಿಂಗ ಗಣಪತಿ ಉತ್ಸವದ ರಂಗಿನೋಂದಿಗೆ ಪ್ರತಿಷ್ಟಾಪಿತವಾಗಲು ಸಜ್ಜಾಗಿದೆ,ಭರದಿಂದ ಸಾಗುತ್ತಿದೆ ವೈಭವದ ಸಿದ್ದತೆ, ಬಾಲಗಂಗಾಧರ ತಿಲಕರ ಆಶಯದಂತೆ ಸನಾತನ ಸಂಸ್ಕೃತಿಯ ನೆಲೆಗಟ್ಟಿನೊಂದಿಗೆ ದೇಶಕಟ್ಟುವ ಕ್ರಾಂತಿಕಾರಿ ಯುವಸಮೂಹದೊಂದಿಗೆ ಹೊಸಹುರುಪು,ನವಚೈತನ್ಯದೊಂದಿಗೆ ಗಣೇಶಾಗಮನಕ್ಕೆ  ಸಜ್ಜಾಗಿ ನಿಂತಿದೆ,ಬನ್ನಿ ತಾಳಿಕೋಟೆಯ ಯುವಸಮೂಹವೇ ಭಾವೈಕ್ಯತೆಯ ಸಂಕೇತವಾದ ಭಗತಸಿಂಗ ಗಣೇಶ ಉತ್ಸವವನ್ನು  ಯಶಸ್ವಿಗೊಳಿಸುವ ಸಂಕಲ್ಪ ತೊಟ್ಟಿರುವುದು ಸಂತಸದ ಸಂಗತಿ.ಭಾರತದ ಸ್ವಾತಂತ್ರ್ಯ  ಸಂಗ್ರಾಮದಲ್ಲಿ ,ದೇಶದ ಹೋರಾಟಗಾರರನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾದ ಬ್ರಿಟಿಷರ ಕಣ್ಜ್ವಾಲೆಯ ಬೇಗುದಿಯಲ್ಲಿ ಕ್ರಾಂತಿಕಾರರ  ಯುವಸಮೂಹದ ಗುಂಪೋಂದು ಕಾಣುತ್ತಿತ್ತಂತೆ ,ಎಲ್ಲೆಂದರಲ್ಲಿ ದೇಶದ ಮೂಲೆ ,ಮೂಲೆಯಲ್ಲಿ ತುರ್ತುಪರಿಸ್ಥಿತಿಯಂತಹ ಶೋಚನೀಯ ಸ್ಥರದಲ್ಲೂ ಗುಂಪು ಗುಂಪಾಗಿ ,ಸಭೆಗಳಾಗುತ್ತಿದ್ದವಂತೆ ,ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯುವಕರ ನರನಾಡಿಗಳಲ್ಲೂ ದೇಶಪ್ರೇಮವನ್ನು ಜಾಗೃತಗೊಳಿಸಲು  ಆ ಯುವನೇತಾರ ಬಾಲಗಂಗಾಧರ ತಿಲಕರು ಸ್ವರಾಜ್ಯ ನನ್ನ ಜನ್ಮಸಿದ್ದ ಹಕ್ಕು ಇದು ಯಾರ ಸ್ವತ್ತು ಅಲ್ಲ ದೇಶರಕ್ಷಣೆಗೆ,ಮಾಡಿದ ಆದರ್ಶಮಾರ್ಗವೇ ಈ ಭವ್ಯ ಗಣೇಶೋತ್ಸವದ ಸಂಭ್ರಮ ಇಂದು ಇಡೀ ಭಾರತಾದ್ಯಂತ ಹಬ್ಬದಂತೆ ಸಂಭ್ರಮ ಕಳೆಕಟ್ಟಿದೆ ....
ಪ್ರತಿಯೊಬ್ಬ ಭಾರತೀಯ ನರನಾಡಿಯಲ್ಲೂ ದೇಶಪ್ರೇಮದ ಕಿಚ್ಚು ಜ್ವಾಲೆಯಂತೆ ಅಂದು ಉರಿಯುತ್ತಿತ್ತು ಕ್ರಾಂತಿಯ ಸಿಡಿಗುಂಡುಗಳಂತೆ ಯುವಸಮೂಹವದು ಘರ್ಜಿಸುತ್ತಿತ್ತು ,ಬ್ರಿಟಿಷರೇ ಭಾರತವ ಬಿಟ್ಟು ತೊಲಗಿ ,ಇನ್ನು ನಿಮಗೆ ಭಾರತದಲ್ಲಿ ಉಳಿಗಾಲವಿಲ್ಲ"ಎನ್ನುವ ಸಂದೇಶ ರವಾನಿಸಿದಾಗಲೇ ದೇಶಾಭಿಮಾನದ ಮುಂದೆ ಜಾತಿ ,ಮತ ,ಭೇದ ,ಪಂಥಗಳೆಲ್ಲವೂ ಶೂನ್ಯ ಭಾವೈಕ್ಯತೆ ಎನ್ನುವ ಅಸ್ತ್ರದಡಿ ದೇಶದ ಅಸ್ತಿತ್ವ ಉಳಿಸುಕೊಳ್ಳುವಲ್ಲಿ  ಭಾರತೀಯರು ಅಂದು 1947 ಅಗಷ್ಟ್ 15 ರಂದು ಕೆಂಪುಕೋಟೆಯ ಮೇಲೋಂದು ಇಡೀ ವಿಶ್ವದ ಕಣ್ಣು ಕುಕ್ಖಿಸುವಂತೆ  ತಿರಂಗಾ ರಾರಾಜಿಸುತ್ತಿತ್ತು ,ಆ ಮಹಾತಾಯಿ ಭಾರತಮಾತೆಗೆ ಆ ದೇಶದ ಸಮೂಹವೆಲ್ಲ ತಾಯಿಯ ಋಣ ತೀರಿಸಿದ ಸಮರ್ಪಣಾ ಭಾವದಲ್ಲಿತ್ತು ,ಬನ್ನಿ ನನ್ನ ಯುವಸಮೂಹವೇ ,ಪ್ರೀತಿಯ ಅಣ್ಣತಮ್ಮಂದಿರೇ ,ಅಂದಿನ ಹಿರಿಯರ ಮಾರ್ಗದರ್ಶನಲ್ಲಿ ಸಾಗಿದ್ದ ದೇಶವದು ಇಂದು ಭಾರತ ದೇಶವಿಂದು !ಸಾಮಾಜಿಕ ವ್ಯವಸ್ಥೆಯ ದುಸ್ತರದಂಚಿಗೆ  ತಲುಪುತ್ತಿದೆ ಯುವಸಮೂಹ ಪಬ್ಬು,ಬಾರುಗಳು,ಐಷಾರಾಮಿ ಜೀವನ ,ಮೋಜು ಮಸ್ತಿಗಳ ಮೂಲಕ ಭಾರತೀಯ ಸಂಸ್ಕತಿ ,ಸಂಪ್ರದಾಯಗಳ ಮರೆಮಾಚಿ  ಎತ್ತಿಂದೆತ್ತಣ ಸಾಗುತ್ತಿದೆ. ಈ ಉತ್ಸವವು ವಿಶಿಷ್ಟವೆನ್ನುವಂತೆ ಭಾರತಮಾತೆಗೆ ಉಡಿತುಂಬುವ ಕಾರ್ಯಕ್ರಮ,ನಾಡರಕ್ಷಣೆಗೆ ಗಣಹೋಮ,ಸಂಗೀತ ರಸಸಂಜೆ,ನೃತ್ಯವೈಭವ,ಯೋಧನ ನಮನ ರಂಗೋಲಿ ಸ್ಪರ್ಧೆ,ಹೀಗೆ ವಿಶಿಷ್ಟತೆಗೆ  ಕೈಗನ್ನಡಿಯಾಗಿದೆ ಬನ್ನಿ ನಾವೆಲ್ಲರೂ ಯುವಕರನ್ನು ಎಚ್ಚರಿಸೋಣ ,ಸಂಸ್ಕತಿ,ಉಳಿವೀನೊಂದಿಗೆ ಭಾವೆಕ್ಯತೆಯ ಕೇಂದ್ರಬಿಂದುವಾಗಿ ಮಾದರಿ ಗಣೇಶೋತ್ಸವದ ಮೂಲಕ ಯುವಸಮೂಹ ಕಟ್ಟುವ ಮೂಲಕ ಸಧೃಡ ದೇಶದ ನಿರ್ಮಾಣದಲ್ಲಿ ಕರಸೇವಕರಂತೆ ನಾವೆಲ್ಲರೂ ಸಾಗೋಣವೆ಼ಂದು ಭಗತಸಿಂಗ್ ಯುವಕ ಮಂಡಳಿಯವರು ಮನವಿ ಮಾಡಿದರು...

Comments

Popular posts from this blog

ಸಮಾಜಘಾತುಕ ಶಕ್ತೀಯ ಘೋರಕೃತ್ಯ ಖಂಡನೀಯ